Popular Posts

Saturday, February 12, 2011

ನಿತ್ಯ ಪ್ರೇಮೋತ್ಸವ!!!

ಹಿಮರಾಶಿಯ ಮುಸುಕನೊದ್ದು
ಸಿಹಿ ನಿದ್ರೆಯಲಿ ಕನವರಿಸುತಿಹ ಭೂರಮೆಗೆ
ಹೊಂಗಿರಣದ ಕೌದಿಯನೊದಿಸಿ
"ಶುಭೋದಯ" ಎಂದನು ರವಿತೇಜ!

ಹಚ್ಚಹಸುರಿನ ದುಪ್ಪಟ್ಟವನೊದ್ದು,
ಜುಳುಜುಳು ಹರಿವ ಝರಿಯೊಳಗೆ ಪಾದಗಳನಾಡಿಸುತ
ತುರುಬಿನ ತುಂಬ ಹೂಮುಡಿದ ಭೂರಮೆ
ರವಿಯತ್ತ ವಾರೆನೋಟ ಬೀರಿ ನಸುನಕ್ಕಳು!

ಜಗಜಗಿಸುವ ಚುಕ್ಕಿಗಳ ನಡುವಿಂದ
ಭೂರಮೆಗೆ ಕ್ಷೀರಧಾರೆಯ ಚೆಲ್ಲುತಿಹ
ನಗುಮೊಗದ ಪೂರ್ಣಚಂದ್ರನು
"ಬಾ ನಲ್ಲೆ ಮಧು ಚಂದ್ರಕೆ" ಎಂದು ಕೂಗಿ ಕರೆದಿಹನು!!!

2 comments:

  1. ಚೆನ್ನಾಗಿದೆ...ನಿಸರ್ಗದ ನಿತ್ಯ ಪ್ರೇಮೋತ್ಸವ ಕವನ..

    ReplyDelete
  2. ಮೇಡಂ, ಧನ್ಯವಾದಗಳು.

    ReplyDelete