Popular Posts

Wednesday, December 29, 2010

ಆಹ್, ಎಂತಹ ಹೆಮ್ಮೆಯ ಕ್ಷಣಗಳಿವು!!!!

ಬರೀ ಹಗರಣಗಳು, ವಂಚನೆಯ ಸುದ್ದಿಗಳನ್ನು ಓದಿ ಓದಿ ಬೇಸರಗೊಂಡಿದ್ದ ನಮಗೆಲ್ಲಾ ಅಪರೂಪಕ್ಕೆಂಬಂತೆ ಸಂತೋಷದ ಕ್ಷಣಗಳು ಎದುರಾಗಿವೆ! ಈ ವರ್ಷದ ಶ್ರೇಷ್ಠ ಭಾರತೀಯ ಕ್ರೀಡಾಪಟುವಿನ ಆಯ್ಕೆ ಮಾಧ್ಯಮಗಳಿಗೆ ತುಸು ತ್ರಾಸದಾಯಕವಾಗಿಬಿಟ್ಟಿದೆ!!! ಯಾಕೆಂದರೆ ಆ ಪಟ್ಟಿ ಬಹು ದೊಡ್ಡದಿದೆ!!! ಸಚಿನ್‌, ಸೈನಾ, ಸೋಮ್ ದೇವ್, ವಿ.ಆನಂದ್, ಅಡ್ವಾಣಿ, ಅಶ್ವಿನಿ, ವಿಜೇಂದರ್,  ಸುಶಿಲ್ ಕುಮಾರ್ ಹೀಗೆ ಬೆಳೆಯುತ್ತಲೇ ಇದೆ. ಇವರೆಲ್ಲರ ಜೊತೆಗೆ ಗ್ರೇಟ್ ವಾಲ್ ಖ್ಯಾತಿಯ ನಮ್ಮ ದ್ರಾವಿಡ್ ಈಗತಾನೆ 12000 ಸಾವಿರ ರನ್‌ ದಾಟಿ, ಮತ್ತೊಂದು ಮಹತ್ವದ ಮೈಲಿಗಲ್ಲಾದ 200 ಕ್ಯಾಚ್ ಗಳ ಸನಿಹ ಬಂದಿದ್ದಾರೆ. ಯಾರೇ ಆಯ್ಕೆಯಾಗಲಿ, ಆದರೆ ಇದಂತೂ ನಮಗೆ ಅತ್ಯಂತ ಹೆಮ್ಮೆಯ, ಅತೀವ ಸಂತೋಷದ, ಬಲು ಅಪರೂಪದ ಕ್ಷಣಗಳು ಎಂಬುದರಲ್ಲಿ ಎರಡುಮಾತಿಲ್ಲ. ಹೌದಲ್ಲವೇ???

No comments:

Post a Comment