ಬನ್ನಿ ಸ್ವಾಗತಿಸೋಣ ಹೊಸ ವರುಷವ
ಬಲು ಹರುಷದಿ ನವ ಉತ್ಸಾಹದಿ.
ಮರೆಯೋಣ ಹಿಂಸೆ ನೋವು ಇತ್ಯಾದಿ
ಸಾಗೋಣ ಮುಂದೆ ಮುಂದೆ ಧೃಢ ಸಂಕಲ್ಪದಿ.
ಆಗೋ ನೋಡಿ ಉದಯರವಿಯನೊಮ್ಮೆ!
ನಿನ್ನೆ ಇಲ್ಲೇನೂ ನೆಡೆದಿಲ್ಲವೆನ್ನುವವನಂತೆ
ಹಸಿರ ಸೆರೆಗಿನ ಮೇಲೆ
ಇಬ್ಬನಿ ಪರದೆಯ ಕವುಚಿ
ಬೆಚ್ಚಗೆ ನಿದ್ರಿಸುತ್ತಿರುವ
ತನ್ನ ನಲ್ಲೆಗೆ ನೆಚ್ಚನೆಯ
ಕಚಗುಳಿಯಿಟ್ಟು ರಮಿಸುತ್ತಿದ್ದಾನೆ!
ಇಬ್ಬನಿಯ ಪರದೆಗೋ ಮುತ್ತಿನ ಮಳೆಗರೆದಿದ್ದಾನೆ!
ಈ ರಸ ವಿಸ್ಮಯವ ಕಂಡ ಚಂದ್ರ
ನಸು ನಾಚಿ ಮರೆಗೆ ಸರಿಯುತ್ತಿದ್ದಾನೆ!
ಆ ಮಹಾ ಸಾಗರದ ಅಲೆಗಳೋ
ತಾವೆಂದೂ ಸುನಾಮಿಯಾಗಿರಲೇ ಇಲ್ಲವೆಂಬಂತೆ
ಭೂರಮೆಯ ಪಾದಗಳನ್ನು ಮೃದುವಾಗಿ ಚುಂಬಿಸಿ
ಜಲಕ್ರೀಡೆಗೆ ಕೂಗಿ ಕರೆಯುತ್ತಿವೆ!
ಇನ್ನು ನಮಗ್ಯಾಕೆ ಬೇಕು?
ಆ ಬೇಕಿಲ್ಲದ ನೋವು ಸಂಕಟಗಳ ನೆನಪು?
ಈ ಭೂಮಿ ಸೂರ್ಯ ಚಂದ್ರ ಸಾಗರಗಳಾರಿಗೂ
ಇಲ್ಲದ ನಿನ್ನೆಯ ಚಿಂತೆ ಕಂತೆಗಳು?!!
ಬನ್ನಿ ಸ್ವಾಗತಿಸೋಣ ಹೊಸ ವರುಷವ
ಬಲು ಹರುಷದಿ ನವ ಉತ್ಸಾಹದಿ.
ಮರೆಯೋಣ ಹಿಂಸೆ ನೋವು ಇತ್ಯಾದಿ
ಸಾಗೋಣ ಮುಂದೆ ಮುಂದೆ ಧೃಢ ಸಂಕಲ್ಪದಿ.
Popular Posts
-
ಮೂವು ಹೊಂಗೆಯ ತಳಿರು ತೋರಣವ ಕಟ್ಟಿ ತುಂಬೆಯ ಹೂವರಳಿಸಿ ಚೈತ್ರ ಮಾಸಕೆ ಹೊಸ ಮುನ್ನುಡಿ ಬರೆದನು ವಸಂತ! ಶುಭ ಮುಂಜ...
-
(ಮೊನ್ನೆ ಸೂರ್ಯನಿಂದ ಬಂದ ಪತ್ರಕ್ಕೆ ಇದೋ ಇಲ್ಲಿದೆ ವಸುಂಧರೆಯ ಉತ್ತರ!) ವಾಹ್! ಎಂತಹ ಅಮರಪ್ರೇಮಿಯೋ ಚಿನ್ನು ನೀನು! ನಂಗೊತ್ತಿತ್ತು ನೀನೊಬ್ಬ ಮಹಾ ರಸಿಕ ಜೊತೆಗೆ ಸ್...
-
ಕಡಿದಾದ ಬೆಟ್ಟಗಳ ಮೈದುಂಬಿ ಹಬ್ಬಿಹ ದಟ್ಟ ಕಾನನದ ಹಸಿರು ಚಪ್ಪರದೊಳಗೆ ನೆತ್ತಿಯ ಮೇಲಿಂದ ನೇಸರನು ಕಿರಣದ ಹೆಜ್ಜೆಗ...
-
ವಸು ಡಾರ್ಲಿಂಗ್, ನಿನಗೊಂದು surprise ಕೊಡಲೆಂದು ಈ ಪ್ರೇಮ ಪತ್ರ. ಹಗಲೆಲ್ಲಾ ನಿನ್ನನ್ನು ಲಲ್ಲೆಗರೆಯುತ್ತಾ, ರಮಿಸುತ...
-
ಪ್ರಿಯತಮನ ಸ್ವಾಗತಿಸಲು ಹಸಿರು ತೋರಣವ ಕಟ್ಟಿ ಬಗೆ ಬಗೆ ಬಣ್ಣದ ಹೂಗಳನರಳಿಸಿ ಗಂಗೆ, ತುಂಗೆ, ಕಾವೇರಿಯರನು ಎಳೆ ಎಳೆಯಾಗಿ ಬಿಡಿಸಿ ಚಿತ್ತಾರ ರಚಿಸಿದಳು ವಸುಂಧರೆ! ನ...
No comments:
Post a Comment